Monday, May 25, 2009

ಹಬ್ಬ ಹಬ್ಬ ದೀಪಾವಳಿ ಹಬ್ಬ !!!!!!!!!!!

ಸೂರ್ಯ ರಶ್ಮಿಯ ಕಂಡು ಅರಳುವ ಹೂವಂತೆ
ದೀಪದ ಬೆಳಕಿಗೆ ನಿಮ್ಮ ಮುಖವರಳಲಿ;
ಕೋಪ, ತಾಪ, ಬೇಸರ ಒತ್ತಡದ ಹಾವಳಿ;
ಕರಗಿಸಲಿ ದೀಪಾವಳಿ;
ಬಾಳಲಿ ದೀಪ ಬೆಳಗಿ,
ನೋವು -ಸೋಲುಗಳ ರಾತ್ರಿ ಓಡಿಸಿ,
ನಸು ನಗುವಿನ ಬೆಳಕಿ ಹೊರಹೊಮ್ಮಲಿ
ಈ ನಿಮ್ಮ ಮೊಗದಿಂದಲಿ;
ಅಲ್ಲಿ - ಇಲ್ಲಿ ಭೂಮಿಗೆ ಮುಗಿಲೊಂದೆ;
ಅಲ್ಲಿ -ಇಲ್ಲಿ ಎಲ್ಲಿದ್ದರು .........
IT -ಬಿಟಿ ಷೇರು ಪೇಟೆ ಏರಿದರೂ, ಕುಸಿದರೂ
ಬೆಳೆಗಳು ಕೈಗೆಟುಕಿದರೂ, ಏಟುಕದಿದ್ದರೂ,
ಸೈಟು -ಮನೆ -ಮಠ ಕನಸಾದರೂ.......
ಅಶಾಂತಿ ಅಭದ್ರತೆ ಅಪ್ಪಿ ನಿಂತರೂ....
ಅಂದು- ಇಂದು ಎಂದೆಂದೂ ...
ದೀಪಗಳ ಹಬ್ಬ ದೀಪಾವಳಿ ಹಾರೈಕೆ ಒಂದು .......
ಬಾಳು ಬೆಳಗಿ ಶುಭವಾಗಲಿ ಎಲ್ಲರಿಗಿಂದು.......

ಚೆಲುವೆ ....... ಓ ನನ್ನ ಚೆಲುವೆ!!!!!!!!!!!!

ಬರುತಿರುವೆ ಚೆಲುವೆ ನಿನ್ನ ನೋಡಲು
ನಿನ್ನ ಕಂಗಳ ಚೆಲುವ ಸವಿಯಲು
ಕಂಗಳಲಿ ನಿರೀಕ್ಷೆಯ ಹೊತ್ತು;
ನವಮಾಸದ ಗರ್ಭದಿಂದ
ಹೊರಬರಲು ತವಕಿಸುವ ಶಿಶುವಂತೆ;
ಗುರಿಯ ಮುಟ್ಟಲು ತವಕಿಸುವ ಓಟಗಾರನಂತೆ;
ತುತ್ತು ಹಿಡಿದು ಹಾರಿಬರುತಿರುವ ಪಕ್ಷಿಯಂತೆ;
ಸೂರ್ಯನ ಕಿರಣಕೆ ಕಾಯುತಿರುವ ಮೊಗ್ಗಿನಂತೆ;
ಮಕರಂದವ ಹೀರಲು ಕಾಯುರಿರುವ ಮಕರದಂತೆ;
ಭೂಮಿಯ ಸೇರಲು ಜಾರುತಿರುವ ಮಂಜ ಹನಿಯಂತೆ ;
ಬರುತಿರುವೆ ಚೆಲುವೆ ನಾ ಬರುತಿರುವೆ.........

Friday, May 15, 2009

ಉಪಮೆ

ನನ್ನಾಕೆ ನುಡಿದರೆ ಗಿಳಿಯಂತೆ
ನಡೆದರೆ ಹಂಸದಂತೆ
ನಾಟ್ಯದಲಿ
ನವಿಲೇ
ಕಂಠವೋ ಕೋಗಿಲೆ
ಹೀಗೇ ಉಪಮಿಸುತಿದ್ದೆ ..............
ಹಾರಿಯೇ ಹೋದಳು ಒಂದು ದಿನ

ಕನಸು

ನಾಳೆಯ ಕನಸು
ಗರಿಬಿಚ್ಚಿ ಕುಣಿದು
ಸವಿನೆನಪುಗಳ ಮೆರವಣಿಗೆಯಲ್ಲಿ
ನೀನು ಬಂದಾಗ ಬೇಸಿಗೆಯ
ಕಾರಿರುಳ ಕತ್ತಲೆಯಲ್ಲೂ
ಕಾಮನಬಿಲ್ಲು !!!!!!!!!!!